ಐಪೋಮಿಯಾ ರೆನಿಫೊರ್ಮಿಸ್ ( )ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಇಲಿಕಿವಿಯು 'ಕನ್ವೋಲ್ವುಲೇಸಿ' ಎಂಬ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. == ಇತರ ಭಾಷೆಗಳಲ್ಲಿ ಇರುವ ಹೆಸರು == ಕನ್ನಡ : ಇಲಿ ಕಿವಿ ಸೊಪ್ಪು ಹಿಂದಿ : ಚುಹಕಾನ್ ತಮಿಳು : ಎಲಿಕಟು ಕೀರಯಿ ತುಳು: ಎಲಿ ಕೆಬಿ ಕೊಂಕಣಿ : ವಿಂದ್ರ ಕಾನು ಸಂಸ್ಕ್ರತ : ಮೂಷಕಪರ್ಣಿ == ಲಕ್ಷಣ == ಈ ಗಿಡ ಅರ್ಧ ಅಡಿ ಎತ್ತರ ಬೆಳೆಯುತ್ತದೆ. ಎಲೆ ದಪ್ಪವಾಗಿದ್ದು ಇಲಿಯ ಕಿವಿ ಆಕಾರವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ಬೆಳೆಯುತ್ತದೆ. ಗದ್ದೆ ಬದಿ ತೋಟ ಹಾಗೂ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೂ ನೇರಳೆ ಬಣ್ಣವನ್ನು ಹೊಂದಿರುತ್ತದೆ. ಈ ಸಸ್ಯ ಮುಂಗಾರು ಮಳೆ ಪ್ರಾರಂಭದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತೇವಾಂಶವಿರುವ ಪ್ರದೇಶಗಳಲ್ಲಿ ಯಾವಾಗಲೂ ಇರುತ್ತದೆ. == ಔಷಧೀಯ ಉಪಯೋಗಗಳು == ಕಿವಿನೋವು : ಎಲೆಯನ್ನು ಹಿಚುಕಿ, ಅದರ ರಸವನ್ನು ಕಿವಿಗೆ ಹಾಕುವುದು. ಸ್ವರ ಭಂಗ : ಎಲೆಯ ರಸಕ್ಕೆ ಎರಡು ಮೂರು ಚಿಟಿಕೆ ಬಜೆಯ ಹುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದು. ಪಿತ್ತ ಜ್ವರ : ಇಲಿಕಿವಿಯ ಕಷಾಯದ ಸೇವನೆ. ಕಣ್ಣುರಿ,ನಿದ್ರಾಹೀನತೆ : ಉಷ್ಣತೆಯಿಂದ ಕಣ್ಣುರಿ ಲಕ್ಷಣವಿದ್ದರೆ, ನಿದ್ರೆ ಬಾರದಿದ್ದರೆ ಇದರ ರಸಕ್ಕೆ ಸಕ್ಕರೆ ಸೇವಿಸಿ ಕುಡಿಯಬೇಕು. ಹಾವು ಕಡಿತ : ಹಾವು ಕಡಿತದ ಸಂದರ್ಭದಲ್ಲಿ ಎಲೆಯ ರಸವನ್ನು ಕುಡಿಯಲು ನೀಡಬಹುದು. ಮತ್ತು ಜಜ್ಜಿದ ಎಲೆಯನ್ನು ಕಡಿತದ ಭಾಗಕ್ಕೆ ಹಚ್ಚಲು ಬಳಸಬಹುದು. ಇಲಿಕಿವಿ ಸೊಪ್ಪಿನ ಚಟ್ನಿಯನ್ನು ಸೇವಿಸುವುದರಿಂದ ಮಕ್ಕಳ ಹೊಟ್ಟೆಹುಳು ನಿವಾರಣೆಯಾಗುತ್ತದೆ. ತಲೆಗೆ ಎಣ್ಣೆ ಬಿಸಿಮಾಡುವಾಗಲೂ ಇದರ ರಸವನ್ನು ಹಾಕಬಹುದು. == ಉಲ್ಲೇಖಗಳು ==